ಆಶ್ರಯ - ಸೌಂದರ್ಯ ನಗರಿಯಲ್ಲೊಂದು ಸುಂದರ ಮನೆ (ಸ್ಮಾರ್ಟ್ ಸಿಟಿಯಲ್ಲೊಂದು ಸ್ಮಾರ್ಟ್ ಮನೆ)
ಸತ್ವ ಆಶ್ರಯ ದೇಶದ (ಭಾರತದ) ಪ್ರಮುಖ ರಿಯಲ್ ಎಸ್ಟೇಟ್ ಡೆವಲಪ್ಪರ್‌ಗಳಲ್ಲಿ ಒಂದಾಗಿರುವ ಸತ್ವ ಸಮೂಹದ ಇತ್ತೀಚಿನ ಕೊಡುಗೆಯಾಗಿದೆ. ಆಶ್ರಯವು ಬಿಡದಿಯ ಮುಂಬರುವ ಸ್ಮಾರ್ಟ್ ಸಿಟಿಗೆ ಹತ್ತಿರದಲ್ಲಿದ್ದು, ನಿಮ್ಮ ಜೀವನವನ್ನು ಆನಂದದಾಯಕವಾಗಿಸುವ ಎಲ್ಲಾ ಸೌಲಭ್ಯಗಳೊಂದಿಗೆ ನಿಮ್ಮ ಕಾರ್ಯಕ್ಷೇತ್ರಕ್ಕೂ ಸಮೀಪದಲ್ಲಿದ್ದು, ಸುಲಲಿತ ಜೀವನಕ್ಕೆ ಸಹಕಾರಿಯಾಗಲಿದೆ. ಸ್ಮಾರ್ಟ್ ಸಿಟಿಯ ನಿರ್ಮಾಣದಿಂದಾಗಿ ಬಿಡದಿ ಆಧುನಿಕ ಮಹಾನಗರವಾಗಿ ಬೆಳೆಯುತ್ತಿದೆ. ರಾಜರಾಜೇಶ್ವರಿ ಪ್ರವೇಶದ್ವಾರದಿಂದ ಕೇವಲ 15ನಿಮಿಷಗಳನ್ನು 10ನೇ ಮಾರ್ಗ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇ ಸಮೀಪದಲ್ಲಿದೆ. ಆಶ್ರಯ ಸಂಪರ್ಕ ಮತ್ತು ಅನುಕೂಲಗಳೆರಡರ ಸಂಗಮವಾಗಿದೆ.
ಬದುಕಿಗೆ ಸುಗಮ ಹಾದಿ
4.2 ಎಕರೆ ಭೂಮಿಯಲ್ಲಿ ಆಶ್ರಯವು 1, 2 ಮತ್ತು 3 ಬಿಹೆಚ್‌ಕೆಯ 660 ಸುಂದರವಾದ ಯೋಜನಾಬದ್ಧ ಕಾಂಪ್ಯಾಕ್ಟ್ ಮನೆಗಳ ಸಮೂಹವಾಗಿದೆ. ಸುತ್ತಲೂ ಸಾಕಷ್ಟು ಹಸಿರಿನ ಸ್ಥಳಗಳನ್ನು ಹೊಂದಿದ್ದು, ಅವುಗಳ ಮಧ್ಯೆ ಆಶ್ರಯ ವನ್ನು ನಿರ್ಮಿಸಲಾಗಿದೆ. ಇದರಿಂದ ಪ್ರತೀ ಮನೆಯೂ ಉತ್ತಮ ಗಾಳಿ ಬೆಳಕನ್ನು ಹೊಂದಿದೆ. ಎಲ್ಲಾ ಅಗತ್ಯ ಸೌಲಭ್ಯಗಳಾದ ಸೆಕ್ಯುರಿಟಿ ಕ್ಯಾಬಿನ್, ಟ್ರಾನ್ಸ್‌ಫಾರ್ಮರ್ ಯಾರ್ಡ್, ಸಂವಹನ ಕೊಠಡಿಗಳು ಮತ್ತು ಭೂಗತ ನೀರಿನ ಪಂಪ್ ಒಳಗೊಂಡಿರುವುದರಿಂದ ಯಾವುದೇ ಕಿರಿಕಿರಿ ಇಲ್ಲದ ಜೀವನ ಶೈಲಿಯನ್ನು ಆಶ್ರಯದಲ್ಲಿ ಆನಂದಿಸಬಹುದು.
ಗುಣಮಟ್ಟದ ಸೌಕರ್ಯಗಳು
ಅನಿಯಮಿತ ವಿನೋದ ಮತ್ತು ಸಾಹಸಮಯ ಜೀವನ ನಿಮಗಾಗಿ ಕಾಯುತ್ತಿದೆ.
ಆಶ್ರಯದಲ್ಲಿ ವಿವಿಧ ರೀತಿಯ ಸೌಲಭ್ಯಗಳಿದ್ದು, 10,00ಚ.ಅಡಿಯ ವಿಶಾಲವಾದ ಕ್ಲಬ್ ಹೌಸ್ ಸೇರಿದಂತೆ ವಿಶಾಲವಾದ ಲಾಬಿ, ಬಹೂಪಯೋಗಿ ಹಾಲ್‌ಗಳು (ಸಭಾಂಗಣಗಳು), ಜಿಮ್, ಯೋಗ ಕೇಂದ್ರ ಹಾಗೂ ನಿಮ್ಮ ಮನೋಲ್ಲಾಸಕ್ಕಾಗಿ ಬ್ಯಾಂಡ್ಮಿಂಟನ್ ಕೋರ್ಟ್‌ನ್ನು ಒಳಗೊಂಡಿದೆ. ಲ್ಯಾಂಡ್‌ಸ್ಕೇಪ್‌ನಲ್ಲಿ ಒಳಗೊಂಡಿರುವ ಇತರೆ ಸೌಲಭ್ಯಗಳೆಂದರೆ ಜಾಗಿಂಗ್ ಟ್ರ್ಯಾಕ್‌ಗಳು, ಈಜುಕೊಳ, ಕಿಡ್ಸ್ ಪೂಲ್, ಮಕ್ಕಳ ಆಟದ ಪ್ರದೇಶ, ಹೊರಾಂಗಣ ಜಿಮ್, ವಿರಾಮ ಮಂಟಪ ಮತ್ತು ಹೊರಾಂಗನ ಯೋಗ ಮತ್ತು ಧ್ಯಾನ ಕೇಂದ್ರಗಳನ್ನು ಒಳಗೊಂಡಿದೆ.
ಯೋಜನೆಯ ಪ್ರಮುಖ ಅಂಶಗಳು
ಅದ್ಭುತ ಪ್ರದೇಶ, ಸ್ಮಾರ್ಟ್ ಸಿಟಿ ಸಮೀಪ, ಹೊಸ ತಾಂತ್ರಿಕತೆಯ ಹಬ್ (ಕೇಂದ್ರ), ಅತ್ಯುತ್ತಮ ಮೌಲ್ಯ, ಮೆಚ್ಚುಗೆಯ ತಾಣ, ಅಂತಾರಾಷ್ಟ್ರೀಯ ತಯಾರಿಕಾ ಸಂಸ್ಥೆಗಳು ಸೇರಿದಂತೆ ಹೆಚ್ಚಿನವರ ಕಾರ್ಯಕ್ಷೇತ್ರಕ್ಕೆ ಹತ್ತಿರದ ತಾಣ, ಆಸ್ಪತ್ರೆಗಳು, ಅಂತಾರಾಷ್ಟ್ರೀಯ ಶಾಲೆಗಳು ಸೇರಿದಂತೆ ಅದ್ಭುತ ಸೌಲಭ್ಯಗಳು, ಅಂತಾರಾಷ್ಟ್ರೀಯ ದರ್ಜೆಯ ಗಾಲ್ಫ್ ಕೋರ್ಸ್ಗೆ ಅತಿ ಸಮೀಪ, ವಿಸ್ತಾರವಾದ ಹಸಿರು ಪ್ರದೇಶ ಮತ್ತು ಮೋಜಿನ ಕೇಂದ್ರಗಳು, ಪವರ್ ಬ್ಯಾಕಪ್.
ಯೋಜನೆಯ ಪ್ರಮುಖ ಅಂಶಗಳು
ಬೆಂಗಳೂರು —ಮೈಸೂರು ಹೆದ್ದಾರಿ ಸಮೀಪದಲ್ಲಿದೆ.
ಕೋಕಕೋಲಾ ಡಿಪೊ —900 ಮೀ.
ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ —3.5 ಕಿ.ಮೀ.
ಈಗಲ್ಟನ್ - ದಿ ಗಾಲ್ಫ್ ರೆಸಾರ್ಟ್ —3.6 ಕಿ.ಮೀ
ಹೆಜ್ಜಾಲ ರೈಲ್ವೆ ನಿಲ್ದಾಣ —4 ಕಿ.ಮೀ.
ಬಿಡದಿ ರೈಲ್ವೆ ನಿಲ್ದಾಣ —4 ಕಿ.ಮೀ.
ಬಿಡದಿ ಕೈಗಾರಿಕಾ ಪ್ರದೇಶ —6.5 ಕಿ.ಮೀ.
ಕ್ರೈಸ್ಟ್ ಯುನಿವರ್ಸಿಟಿ ಕೆಂಗೇರಿ ಕ್ಯಾಂಪಸ್ —7 ಕಿ.ಮೀ.
ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮೆಡಿಕಲ್ —8.3 ಕಿ.ಮೀ.
ಐಬಿಎಸ್ ಬ್ಯುಸಿನೆಸ್ ಸ್ಕೂಲ್ —11 ಕಿ.ಮೀ.
ಕೆಂಗೇರಿ ಮೆಟ್ರೋ ಸ್ಟೇಷನ್ —14 ಕಿ.ಮೀ.